ಜಯಣ್ಣ ಕಂಬೈನ್ಸ್ ಲಾಂಛನದಲ್ಲಿ ಜಯಣ್ಣ ಹಾಗೂ ಭೋಗೇಂದ್ರ ಅವರು ನಿರ್ಮಿಸಿರುವ ‘ಬುಲೆಟ್ ಬಸ್ಯಾ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಜಯತೀರ್ಥ ನಿರ್ದೇಶನದ ಈ ಚಿತ್ರಕ್ಕೆ ಸುಜ಼್ಞಾನ್ ಅವರ ಛಾಯಾಗ್ರಹಣವಿದೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ಕೆ.ಎಂ.ಪ್ರಕಾಶ್ ಸಂಕಲನ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ, ಹರ್ಷ, ಮುರಳಿ ನೃತ್ಯ ನಿರ್ದೇಶನ ಹಾಗೂ ಹೊಸ್ಮನೆ ಮೂರ್ತಿ ಕಲಾ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಶರಣ್, ಹರಿಪ್ರಿಯ, ಗಿರಿ ಗೋಧುಳಿ, ಪ್ರಶಾಂತ್ ಸಿದ್ದಿ, ಸಾಧುಕೋಕಿಲ, ರಮೇಶ್ಭಟ್, ಗಿರಿಜಾ ಲೋಕೇಶ್, ಯತಿರಾಜ್ ಜಗ್ಗೇಶ್, ಮುನಿ, ನೀನಾಸಂ ಅಸ್ವತ್, ತನ್ವೀರ್ ಮುಂತಾದವರಿದ್ದಾರೆ.